ಗೋವಿನ ಬಾಳು (ಗೋವಿನ ಹಾಡು)
ಎಸ್.ಜಿ ನರಸಿಂಹಾಚಾರ್ (1862-1907- ಕ್ರಿ.ಶ.೧೮೬೨-೧೯೦೭) ಪ್ರಾಚೀನ ಕನ್ನಡ ಕಾವ್ಯಗಳನ್ನು ಸಂಪಾದಿಸಿ ಹೊರತಂದ ಮೊದಲ ಕನ್ನಡಿಗರು, ಸ್ವಂತ ಕವಿಗಳೂ ಹೌದು. ಹುಟ್ಟಿದ್ದು ಶ್ರೀರಂಗಪಟ್ಟಣದಲ್ಲಿ. ಇವರು ಕನ್ನಡದ ಪ್ರಸಿದ್ಡ ಅನುವಾದಕಾರರು. ಇವರು ಆಂಗ್ಲ ಭಾ‍ಷೆಯ ಪ್ರಸಿದ್ಡ ಮಕ್ಕಳ ಗೀತೆಯಾದ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ನ್ನು ಕನ್ನಡಕ್ಕೆ ಮಿರು ಮಿರುಗುವ ಹಾ ಕಿರು ತಾರಗಯ ಎಂದು ಅನುವಾದ ಮಾಡಿದ್ದಾರೆ.ಮೊದಲು ಇಂಗ್ಲಿಷ್ ಗೀತೆಗಳ ಅನುವಾದ ಕಾರ್ಯವನ್ನು ಪ್ರಾರಂಬಿಸಿದವರು.*ಎಸ್.ಜಿ ನರಸಿಂಹಾಚಾರ್ಯ

ಗೋವಿನ ಹಾಡುಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಉಳುವೆ ನಾ ಭೂಮಿಯನು ಹೊರವೆ ನಾ ಹೇರನ್ನು
ತುಳಿದು ಕಡ್ಡಿಯ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಹಾಯೆ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ 
ಆಯವರಿತು ಹೊಡೆಯೆ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಹಾದಿ ಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.ಕವಿ:ಎಸ್. ಜಿ. ನರಸಿಂಹಾಚಾರ್-ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರಸಿಂಹಾಚಾರ್, ಎಸ್ ಜಿ

ನೋಡಿ
ಶಿಶು ಸಾಹಿತ್ಯ
ಪರಿವಿಡಿ

ಉಲ್ಲೇಖ
ವರ್ಗ:ಕನ್ನಡ ಸಾಹಿತ್ಯವರ್ಗ:ಶಿಶುಸಾಹಿತ್ಯ